ಇ-ಸೇವಾ ಕೇಂದ್ರ, ವಿಸಿ ಕ್ಯಾಬಿನ್ ಮತ್ತು ಸಹಾಯ ಕೇಂದ್ರ
ಬೆಂಗಳೂರು ನಗರ ಸಿವಿಲ್ ನ್ಯಾಯಾಲಯದ ಸಂಕೀರ್ಣದಲ್ಲಿ “ಇ-ಸೇವಾ ಕೇಂದ್ರ” ವನ್ನು ಪರೀಕ್ಷಾರ್ಥವಾಗಿ ದಿನಾಂಕ 15.05.2020ರಂದು ಅಂದಿನ ಕರ್ನಾಟಕ ಉಚ್ಛ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಅರವಿಂದ್ ಕುಮಾರ್ ರವರು ಉದ್ಘಾಟಿಸಿದರು. ಇ-ಸೇವಾ ಕೇಂದ್ರವು ನಗರ ಸಿವಿಲ್ ನ್ಯಾಯಾಲಯದ ನ್ಯೂ ಅನೆಕ್ಸ್ ಕಟ್ಟಡದ ನೆಲ ಮಾಳಿಗೆಯಲ್ಲಿ ನ್ಯಾಯಿಕ ಸೇವಾ ಕೇಂದ್ರ (Judicial Service Centre)ದ ಬಳಿ ಕಾರ್ಯ ನಿರ್ವಹಿಸುತ್ತಿದೆ.
ವಾಣಿಜ್ಯ ನ್ಯಾಯಾಲಯಗಳ ಸಂಕೀರ್ಣದ 2ನೇ ಮಹಡಿಯಲ್ಲಿ ದಿನಾಂಕ 07.07.2021ರಂದು ಇ-ಸೇವಾ ಕೇಂದ್ರವನ್ನು ಸ್ಥಾಪಿಸಲಾಗಿದೆ.
ಈ ಕೇಂದ್ರಗಳು ನಾಗರಿಕರಿಗೆ ನ್ಯಾಯದ ಹಕ್ಕನ್ನು ಕೈಗೆಟುಕುವಂತೆ ಮಾಡುವಲ್ಲಿ ಮತ್ತು ಒಂದೇ ಸೂರಿನಡಿ ಹಲವು ಸೇವೆಗಳನ್ನು ಒದಗಿಸುವುದರಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಕ್ರಮ ಸಂಖ್ಯೆ | ಸೇವೆಗಳು |
---|---|
1. | ಪ್ರಕರಣದ ಸ್ಥಿತಿ, ವಿಚಾರಣೆಯ ಮುಂದಿನ ದಿನಾಂಕ ಮತ್ತು ಇತರ ವಿವರಗಳ ಕುರಿತು ವಿಚಾರಣೆಗಳನ್ನು ನಿರ್ವಹಿಸುವುದು. | 2. | ಇ-ಫೈಲಿಂಗ್ ಅನ್ನು ಉತ್ತೇಜಿಸಲು ದಾಖಲೆಗಳನ್ನು ಸ್ಕ್ಯಾನ್ ಮಾಡುವ ಬಗ್ಗೆ , ಇ-ಸಹಿಗಳನ್ನು ಹಾಕುವ ಬಗ್ಗೆ ಮತ್ತು ಆ ದಾಖಲೆಗಳನ್ನು ಇ-ಫೈಲಿಂಗ್ ಜಾಲತಾಣದಲ್ಲಿ ಅಪ್ಲೋಡ್ ಮಾಡುವ ಬಗ್ಗೆ ವಿವರಿಸುವುದು. | 3. | ಇ-ಪಾವತಿ ಪೋರ್ಟಲ್ ಮೂಲಕ ನ್ಯಾಯಾಲಯದ ಶುಲ್ಕಗಳನ್ನು ಪಾವತಿಸುವ ವಿಧಾನವನ್ನು ತಿಳಿಸುವುದು ಮತ್ತು ಸಹಾಯ ಒದಗಿಸುವುದು. |
4. | ನ್ಯಾಯಾಲಯದ ದಾಖಲೆಗಳ ಪ್ರಮಾಣೀಕೃತ ಪ್ರತಿಗಳು ಮತ್ತು ಅಂತಹ ಇತರ ಸೇವೆಗಳಿಗಾಗಿ ಆನ್ಲೈನ್ ಅರ್ಜಿಗಳನ್ನು ಸಲ್ಲಿಅಲು ನೆರವು ನೀಡುವುದು. |
5. | Android ಮತ್ತು IOS ಗಳಲ್ಲಿ eCourtIs ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಬಳಸುವ ಬಗ್ಗೆ ಸಹಾಯ ಮಾಡುವುದು. |
6. | ಡಿಜಿಟಲ್/ಆಧಾರ್ ಆಧಾರಿತ ಸಹಿಯನ್ನು ಪಡೆಯಲು ಅರ್ಜಿ ಸಲ್ಲಿಸಲು ಮತ್ತು ಆ ಸೇವೆಯನ್ನು ಪಡೆಯಲು ಸಹಾಯವನ್ನು ಒದಗಿಸುವುದು. |
7. | ಕಾರಾಗೃಹದಲ್ಲಿರುವ ಸಂಬಂಧಿಕರನ್ನು ವೀಡಿಯೊ ಕಾನ್ಫರೆನ್ಸ್ ಮೂಲಕ ಭೇಟಿ ಮಾಡಲು ವ್ಯವಸ್ಥೆ ಮಾಡುವುದು. |
8. | ನ್ಯಾಯಾಲಯಗಳಲ್ಲಿ ವಿಡಿಯೋ ಕಾನ್ಫರೆನ್ಸ್ ವಿಚಾರಣೆಯನ್ನು ಏರ್ಪಡಿಸುವ ಮತ್ತು ನಡೆಸುವ ವಿಧಾನವನ್ನು ವಿವರಿಸುವುದು. |
9. | SMS ಸೇವೆಯನ್ನು ಒದಗಿಸಲು CIS ತಂತ್ರಾಂಶದಲ್ಲಿ ವಕೀಲರುಗಳ ನೋಂದಣಿ ಮಾಡುವುದು. |
10. | ನ್ಯಾಯಾಲಯಗಳ ಸ್ಥಳ ಮತ್ತು ಅದರ ಪ್ರಕರಣ ಪಟ್ಟಿಯ ಕುರಿತು ಮಾಹಿತಿ ಒದಗಿಸುವುದು. |
11. | ರಜೆಯಲ್ಲಿರುವ ನ್ಯಾಯಾಧೀಶರ ಬಗ್ಗೆ ಮಾಹಿತಿಯನ್ನು ಒದಗಿಸುವುದು. |
12. | ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಉಚಿತ ಕಾನೂನು ಸೇವೆಗಳನ್ನು ಹೇಗೆ ಪಡೆಯುವುದು ಎಂಬುದರ ಕುರಿತು ಮಾರ್ಗದರ್ಶನ ನೀಡುವುದು. |
13. | ವರ್ಚುವಲ್ ನ್ಯಾಯಾಲಯದಲ್ಲಿ ಟ್ರಾಫಿಕ್ ಚಲನ್ ವಿಲೇವಾರಿ ಮಾಡಲು ಅನುಕೂಲ ಮಾಡುವುದು. |
14. | eCourts ಯೋಜನೆಯಡಿಯಲ್ಲಿ ಲಭ್ಯವಿರುವ ಸೇವೆಗಳಿಗೆ ಸಂಬಂಧಿಸಿದಂತೆ ಸಹಾಯ ಒದಗಿಸುವುದು. |
ಬೆಂಗಳೂರಿನ ನಗರ ಸಿವಿಲ್ ನ್ಯಾಯಾಲಯ ಸಮುಚ್ಛಯದ ನೆಲಮಹಡಿಯಲ್ಲಿರುವ ಇ-ಸೇವಾ ಕೇಂದ್ರದದಲ್ಲಿ ನಾಲ್ಕು ವಿಸಿ ಕ್ಯಾಬಿನ್ಗಳನ್ನು ಪ್ರಾರಂಭಿಸಲಾಗಿದೆ ಮತ್ತು ವೀಡಿಯೊ ಕಾನ್ಫರೆನ್ಸ್ ನಡೆಸಲು ವಿಸಿ ಕ್ಯಾಬಿನ್ನಲ್ಲಿ ವಕೀಲರು ಮತ್ತು ದಾವೆದಾರರ ಬಳಕೆಗಾಗಿ ಅಗತ್ಯವಾದ ಹಾರ್ಡ್ವೇರ್ಗಳನ್ನು ಅಳವಡಿಸಲಾಗಿದೆ.
ವಿಸಿ ಕ್ಯಾಬಿನ್ಗಳನ್ನು 21/06/2023 ರಂದು ಬೆಂಗಳೂರಿನ ಪ್ರಧಾನ ನಗರ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರು, ಲಘು ವ್ಯವಹಾರಗಳ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಧಾನ ಜಿಲ್ಲಾ ನ್ಯಾಯಾಧೀಶರು, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಇವರುಗಳ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಯಿತು.
ಈ ವಿಸಿ ಕ್ಯಾಬಿನ್ಗಳನ್ನು ರಾಜ್ಯದ ಮತ್ತು ಹೊರ ರಾಜ್ಯಗಳ ವಿವಿಧ ನ್ಯಾಯಾಲಯಗಳ ನಡುವೆ ವಿಡಿಯೋ ಕಾನ್ಫರೆನ್ಸ್ ನಡೆಸಲು ಕೋರ್ಟ್ ಪಾಯಿಂಟ್ ಮತ್ತು ರಿಮೋಟ್ ಪಾಯಿಂಟ್ ಆಗಿ ಬಳಸಲಾಗುತ್ತದೆ.
ಬೆಂಗಳೂರಿನ ನಗರ ಸಿವಿಲ್ ನ್ಯಾಯಾಲಯ ಸಮುಚ್ಛಯದ ನೆಲಮಹಡಿಯಲ್ಲಿರುವ ಇ-ಸೇವಾ ಕೇಂದ್ರದದಲ್ಲಿ ನಾಲ್ಕು ಸಹಾಯ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಇಕೋರ್ಟ್ ಯೋಜನೆಯಡಿಯಲ್ಲಿ ಸಕ್ರಿಯಗೊಳಿಸಲಾಗಿರುವ ಇ-ಫೈಲಿಂಗ್, ಇ-ಪಾವತಿ ಮತ್ತು ಇತರ ಇ-ಸೇವೆಗಳನ್ನು ಬಳಸಲು ಅನುವು ಮಾಡಿಕೊಡಲು ವಕೀಲರು ಮತ್ತು ದಾವೆದಾರರ ಬಳಕೆಗಾಗಿ ಸಹಾಯ ಕೇಂದ್ರಗಳಲ್ಲಿ ಅಗತ್ಯ ಹಾರ್ಡ್ವೇರ್ಗಳನ್ನು ಅಳವಡಿಸಲಾಗಿದೆ.
ಸಹಾಯ ಕೇಂದ್ರಗಳನ್ನು 21/06/2023 ರಂದು ಬೆಂಗಳೂರಿನ ಪ್ರಧಾನ ನಗರ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರು, ಲಘು ವ್ಯವಹಾರಗಳ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಧಾನ ಜಿಲ್ಲಾ ನ್ಯಾಯಾಧೀಶರು, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಇವರುಗಳ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಯಿತು.