ಮುಕ್ತಾಯ ಮಾಡು

    ಇ-ಸಮನ್ಸ್ ಸೇವೆ

    ಪ್ರಕಟಿಸಿದ ದಿನಾಂಕ: ಲಭ್ಯವಿಲ್ಲ

    ವಕೀಲ ಬಾಂಧವರ ಗಮನಕ್ಕೆ

    ವಕೀಲರು ಮತ್ತು ಕಕ್ಷಿದಾರರ ಉಪಯೋಗಕ್ಕಾಗಿ ಇ-ಸಮನ್ಸ್ ಸೇವೆಯನ್ನು ಪ್ರಾರಂಭಿಸಲಾಗುತ್ತಿದ್ದು, ಇದರ ಮೂಲಕ ನ್ಯಾಯಾಲಯದಿಂದ ಜಾರಿಯಾಗುವ ನೋಟೀಸ್/ಸಮನ್ಸುಗಳನ್ನು ಪಿಡಿಎಫ್ ರೂಪದಲ್ಲಿ ವಕೀಲರು/ಕಕ್ಷಿದಾರರು/ಸಾಕ್ಷಿದಾರರ ನೋಂದಾಯಿತ ಇ-ಮೇಲ್ ಖಾತೆಗಳಿಗೆ ಕಳುಹಿಸಲಾಗುವುದು.

    ಆದುದರಿಂದ, ತಾವುಗಳು ಹೊಸ ಪ್ರಕರಣಗಳನ್ನು ದಾಖಲಿಸುವ ಸಮಯದಲ್ಲಿ ಮತ್ತು ಚಾಲ್ತಿಯಲ್ಲಿರುವ ಪ್ರಕರಣಗಳಲ್ಲಿ ಮಾಹಿತಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಸಮಯದಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ವಕೀಲರ/ಕಕ್ಷಿದಾರರ/ಸಾಕ್ಷಿದಾರರ/ಇತರೆ ಸಂಬಂಧಪಟ್ಟ ವ್ಯಕ್ತಿ/ಸಂಸ್ಥೆಗಳ ಇ-ಮೇಲ್ ಐಡಿಗಳನ್ನು ಕಡ್ಡಾಯವಾಗಿ ಸಲ್ಲಿಸುವ ಮೂಲಕ ಈ ಸೇವೆಯ ಸದುಪಯೋಗ ಪಡೆಯಬೇಕು ಎಂದು ಕೋರಲಾಗಿದೆ.

    ಮುಖ್ಯ ವಿಲೇಖನಾಧಿಕಾರಿಗಳು
    ನಗರ ಸಿವಿಲ್ ನ್ಯಾಯಾಲಯ
    ಬೆಂಗಳೂರು