ಮುಕ್ತಾಯ ಮಾಡು

    ಇ-ಸೇವಾ ಕೇಂದ್ರ, ವಿಸಿ ಕ್ಯಾಬಿನ್ ಮತ್ತು ಸಹಾಯ ಕೇಂದ್ರ

    ಪ್ರಕಟಿಸಿದ ದಿನಾಂಕ: ಲಭ್ಯವಿಲ್ಲ

    ಬೆಂಗಳೂರು ನಗರ ಸಿವಿಲ್ ನ್ಯಾಯಾಲಯದ ಸಂಕೀರ್ಣದಲ್ಲಿ “ಇ-ಸೇವಾ ಕೇಂದ್ರ” ವನ್ನು ಪರೀಕ್ಷಾರ್ಥವಾಗಿ ದಿನಾಂಕ 15.05.2020ರಂದು ಅಂದಿನ ಕರ್ನಾಟಕ ಉಚ್ಛ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಅರವಿಂದ್ ಕುಮಾರ್ ರವರು ಉದ್ಘಾಟಿಸಿದರು. ಇ-ಸೇವಾ ಕೇಂದ್ರವು ನಗರ ಸಿವಿಲ್ ನ್ಯಾಯಾಲಯದ ನ್ಯೂ ಅನೆಕ್ಸ್ ಕಟ್ಟಡದ ನೆಲ ಮಾಳಿಗೆಯಲ್ಲಿ ನ್ಯಾಯಿಕ ಸೇವಾ ಕೇಂದ್ರ (Judicial Service Centre)ದ ಬಳಿ ಕಾರ್ಯ ನಿರ್ವಹಿಸುತ್ತಿದೆ.
    ವಾಣಿಜ್ಯ ನ್ಯಾಯಾಲಯಗಳ ಸಂಕೀರ್ಣದ 2ನೇ ಮಹಡಿಯಲ್ಲಿ ದಿನಾಂಕ 07.07.2021ರಂದು ಇ-ಸೇವಾ ಕೇಂದ್ರವನ್ನು ಸ್ಥಾಪಿಸಲಾಗಿದೆ.
    ಈ ಕೇಂದ್ರಗಳು ನಾಗರಿಕರಿಗೆ ನ್ಯಾಯದ ಹಕ್ಕನ್ನು ಕೈಗೆಟುಕುವಂತೆ ಮಾಡುವಲ್ಲಿ ಮತ್ತು ಒಂದೇ ಸೂರಿನಡಿ ಹಲವು ಸೇವೆಗಳನ್ನು ಒದಗಿಸುವುದರಲ್ಲಿ ಮಹತ್ವದ ಹೆಜ್ಜೆಯಾಗಿದೆ.

    ಇ-ಸೇವಾ ಕೇಂದ್ರದಲ್ಲಿ ಲಭ್ಯವಿರುವ ಸೇವೆಗಳು
    ಕ್ರಮ ಸಂಖ್ಯೆ ಸೇವೆಗಳು
    1. ಪ್ರಕರಣದ ಸ್ಥಿತಿ, ವಿಚಾರಣೆಯ ಮುಂದಿನ ದಿನಾಂಕ ಮತ್ತು ಇತರ ವಿವರಗಳ ಕುರಿತು ವಿಚಾರಣೆಗಳನ್ನು ನಿರ್ವಹಿಸುವುದು.
    2. ಇ-ಫೈಲಿಂಗ್ ಅನ್ನು ಉತ್ತೇಜಿಸಲು ದಾಖಲೆಗಳನ್ನು ಸ್ಕ್ಯಾನ್ ಮಾಡುವ ಬಗ್ಗೆ , ಇ-ಸಹಿಗಳನ್ನು ಹಾಕುವ ಬಗ್ಗೆ ಮತ್ತು ಆ ದಾಖಲೆಗಳನ್ನು ಇ-ಫೈಲಿಂಗ್ ಜಾಲತಾಣದಲ್ಲಿ ಅಪ್ಲೋಡ್ ಮಾಡುವ ಬಗ್ಗೆ ವಿವರಿಸುವುದು.
    3. ಇ-ಪಾವತಿ ಪೋರ್ಟಲ್ ಮೂಲಕ ನ್ಯಾಯಾಲಯದ ಶುಲ್ಕಗಳನ್ನು ಪಾವತಿಸುವ ವಿಧಾನವನ್ನು ತಿಳಿಸುವುದು ಮತ್ತು ಸಹಾಯ ಒದಗಿಸುವುದು.
    4. ನ್ಯಾಯಾಲಯದ ದಾಖಲೆಗಳ ಪ್ರಮಾಣೀಕೃತ ಪ್ರತಿಗಳು ಮತ್ತು ಅಂತಹ ಇತರ ಸೇವೆಗಳಿಗಾಗಿ ಆನ್‌ಲೈನ್ ಅರ್ಜಿಗಳನ್ನು ಸಲ್ಲಿಅಲು ನೆರವು ನೀಡುವುದು.
    5. Android ಮತ್ತು IOS ಗಳಲ್ಲಿ eCourtIs ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಬಳಸುವ ಬಗ್ಗೆ ಸಹಾಯ ಮಾಡುವುದು.
    6. ಡಿಜಿಟಲ್/ಆಧಾರ್ ಆಧಾರಿತ ಸಹಿಯನ್ನು ಪಡೆಯಲು ಅರ್ಜಿ ಸಲ್ಲಿಸಲು ಮತ್ತು ಆ ಸೇವೆಯನ್ನು ಪಡೆಯಲು ಸಹಾಯವನ್ನು ಒದಗಿಸುವುದು.
    7. ಕಾರಾಗೃಹದಲ್ಲಿರುವ ಸಂಬಂಧಿಕರನ್ನು ವೀಡಿಯೊ ಕಾನ್ಫರೆನ್ಸ್ ಮೂಲಕ ಭೇಟಿ ಮಾಡಲು ವ್ಯವಸ್ಥೆ ಮಾಡುವುದು.
    8. ನ್ಯಾಯಾಲಯಗಳಲ್ಲಿ ವಿಡಿಯೋ ಕಾನ್ಫರೆನ್ಸ್ ವಿಚಾರಣೆಯನ್ನು ಏರ್ಪಡಿಸುವ ಮತ್ತು ನಡೆಸುವ ವಿಧಾನವನ್ನು ವಿವರಿಸುವುದು.
    9. SMS ಸೇವೆಯನ್ನು ಒದಗಿಸಲು CIS ತಂತ್ರಾಂಶದಲ್ಲಿ ವಕೀಲರುಗಳ ನೋಂದಣಿ ಮಾಡುವುದು.
    10. ನ್ಯಾಯಾಲಯಗಳ ಸ್ಥಳ ಮತ್ತು ಅದರ ಪ್ರಕರಣ ಪಟ್ಟಿಯ ಕುರಿತು ಮಾಹಿತಿ ಒದಗಿಸುವುದು.
    11. ರಜೆಯಲ್ಲಿರುವ ನ್ಯಾಯಾಧೀಶರ ಬಗ್ಗೆ ಮಾಹಿತಿಯನ್ನು ಒದಗಿಸುವುದು.
    12. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಉಚಿತ ಕಾನೂನು ಸೇವೆಗಳನ್ನು ಹೇಗೆ ಪಡೆಯುವುದು ಎಂಬುದರ ಕುರಿತು ಮಾರ್ಗದರ್ಶನ ನೀಡುವುದು.
    13. ವರ್ಚುವಲ್ ನ್ಯಾಯಾಲಯದಲ್ಲಿ ಟ್ರಾಫಿಕ್ ಚಲನ್ ವಿಲೇವಾರಿ ಮಾಡಲು ಅನುಕೂಲ ಮಾಡುವುದು.
    14. eCourts ಯೋಜನೆಯಡಿಯಲ್ಲಿ ಲಭ್ಯವಿರುವ ಸೇವೆಗಳಿಗೆ ಸಂಬಂಧಿಸಿದಂತೆ ಸಹಾಯ ಒದಗಿಸುವುದು.
    ವಿಸಿ ಕ್ಯಾಬಿನ್

    ಬೆಂಗಳೂರಿನ ನಗರ ಸಿವಿಲ್ ನ್ಯಾಯಾಲಯ ಸಮುಚ್ಛಯದ ನೆಲಮಹಡಿಯಲ್ಲಿರುವ ಇ-ಸೇವಾ ಕೇಂದ್ರದದಲ್ಲಿ ನಾಲ್ಕು ವಿಸಿ ಕ್ಯಾಬಿನ್‌ಗಳನ್ನು ಪ್ರಾರಂಭಿಸಲಾಗಿದೆ ಮತ್ತು ವೀಡಿಯೊ ಕಾನ್ಫರೆನ್ಸ್ ನಡೆಸಲು ವಿಸಿ ಕ್ಯಾಬಿನ್‌ನಲ್ಲಿ ವಕೀಲರು ಮತ್ತು ದಾವೆದಾರರ ಬಳಕೆಗಾಗಿ ಅಗತ್ಯವಾದ ಹಾರ್ಡ್‌ವೇರ್‌ಗಳನ್ನು ಅಳವಡಿಸಲಾಗಿದೆ.

    ವಿಸಿ ಕ್ಯಾಬಿನ್‌ಗಳನ್ನು 21/06/2023 ರಂದು ಬೆಂಗಳೂರಿನ ಪ್ರಧಾನ ನಗರ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರು, ಲಘು ವ್ಯವಹಾರಗಳ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಧಾನ ಜಿಲ್ಲಾ ನ್ಯಾಯಾಧೀಶರು, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಇವರುಗಳ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಯಿತು.

    ಈ ವಿಸಿ ಕ್ಯಾಬಿನ್‌ಗಳನ್ನು ರಾಜ್ಯದ ಮತ್ತು ಹೊರ ರಾಜ್ಯಗಳ ವಿವಿಧ ನ್ಯಾಯಾಲಯಗಳ ನಡುವೆ ವಿಡಿಯೋ ಕಾನ್ಫರೆನ್ಸ್ ನಡೆಸಲು ಕೋರ್ಟ್ ಪಾಯಿಂಟ್ ಮತ್ತು ರಿಮೋಟ್ ಪಾಯಿಂಟ್ ಆಗಿ ಬಳಸಲಾಗುತ್ತದೆ.

    ಸಹಾಯ ಕೇಂದ್ರ

    ಬೆಂಗಳೂರಿನ ನಗರ ಸಿವಿಲ್ ನ್ಯಾಯಾಲಯ ಸಮುಚ್ಛಯದ ನೆಲಮಹಡಿಯಲ್ಲಿರುವ ಇ-ಸೇವಾ ಕೇಂದ್ರದದಲ್ಲಿ ನಾಲ್ಕು ಸಹಾಯ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಇಕೋರ್ಟ್ ಯೋಜನೆಯಡಿಯಲ್ಲಿ ಸಕ್ರಿಯಗೊಳಿಸಲಾಗಿರುವ ಇ-ಫೈಲಿಂಗ್, ಇ-ಪಾವತಿ ಮತ್ತು ಇತರ ಇ-ಸೇವೆಗಳನ್ನು ಬಳಸಲು ಅನುವು ಮಾಡಿಕೊಡಲು ವಕೀಲರು ಮತ್ತು ದಾವೆದಾರರ ಬಳಕೆಗಾಗಿ ಸಹಾಯ ಕೇಂದ್ರಗಳಲ್ಲಿ ಅಗತ್ಯ ಹಾರ್ಡ್‌ವೇರ್‌ಗಳನ್ನು ಅಳವಡಿಸಲಾಗಿದೆ.

    ಸಹಾಯ ಕೇಂದ್ರಗಳನ್ನು 21/06/2023 ರಂದು ಬೆಂಗಳೂರಿನ ಪ್ರಧಾನ ನಗರ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರು, ಲಘು ವ್ಯವಹಾರಗಳ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಧಾನ ಜಿಲ್ಲಾ ನ್ಯಾಯಾಧೀಶರು, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಇವರುಗಳ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಯಿತು.