ಮುಕ್ತಾಯ ಮಾಡು

    ಗೌರವಾನ್ವಿತ ಡಾ. ನ್ಯಾಯಮೂರ್ತಿ ಎಚ್. ಬಿ. ಪ್ರಭಾಕರ ಶಾಸ್ತ್ರಿ

    Hon'ble Dr. Justice H.B.Prabhakara Sastry
    • ಹುದ್ದೆ: ಮಾಜಿ ನ್ಯಾಯಾಧೀಶರು, ಕರ್ನಾಟಕ ಉಚ್ಚ ನ್ಯಾಯಾಲಯ

    ಗೌರವಾನ್ವಿತ ಡಾ. ನ್ಯಾಯಮೂರ್ತಿ ಹೊಸೂರು ಭುಜಂಗರಾಯ ಪ್ರಭಾಕರ ಶಾಸ್ತ್ರಿ ಅವರು ದಿನಾಂಕ ಏಪ್ರಿಲ್ 04, 1962 ರಂದು ದಾವಣಗೆರೆಯಲ್ಲಿ ಜನಿಸಿದರು. ದಾವಣಗೆರೆಯ ಆರ್. ಎಲ್. ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿರುವ ಮಾನ್ಯರು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಎಂ. ಎ. ಮತ್ತು ಎಲ್‌. ಎಲ್‌. ಎಂ. ಪದವಿಗಳನ್ನು ಮತ್ತು ಭಾರತೀಯ ವಿಶ್ವವಿದ್ಯಾಲಯದ ನ್ಯಾಷನಲ್ ಲಾ ಸ್ಕೂಲ್‌ನಿಂದ ಪಿ.ಎಚ್‌.ಡಿಯನ್ನು ಪಡೆದಿರುತ್ತಾರೆ. 1991ರಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದ ಶ್ರೀಯುತರು ಬೆಂಗಳೂರು ಮತ್ತು ಇತರ ಸ್ಥಳಗಳ ವಿವಿಧ ನ್ಯಾಯಾಲಯಗಳಲ್ಲಿ ವಕೀಲರಾಗಿ ಸೇವೆ ಸಲ್ಲಿಸಿರುತ್ತಾರೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೆಷನ್ಸ್ ನ್ಯಾಯಾಲಯದಲ್ಲಿ ಪ್ರತಿವಾದಿಯಿಲ್ಲದ ಆರೋಪಿಗಳಿಗೆ ಸ್ಥಾಯಿ ವಕೀಲರಾಗಿಯೂ ಸೇವೆ ಸಲ್ಲಿಸಿದ್ದಾರೆ. ಮೇ 27, 2002 ರಂದು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿ ನೇಮಕಗೊಂಡ ಇವರು ಕಲಬುರ್ಗಿ, ಬೆಂಗಳೂರು, ಬಾಗಲಕೋಟೆ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಮತ್ತು ಭಾರತದ ಸರ್ವೋಚ್ಚ ನ್ಯಾಯಾಲಯದ ರಿಜಿಸ್ಟ್ರಿಯಲ್ಲಿ ಅಲ್ಪಾವಧಿಗೆ ರಿಜಿಸ್ಟ್ರಾರ್ ಆಗಿಯೂ ಸೇವೆ ಸಲ್ಲಿಸಿರುತ್ತಾರೆ. ಫೆಬ್ರವರಿ 21, 2017 ರಂದು ಕರ್ನಾಟಕ ಉಚ್ಛ ನ್ಯಾಯಾಲಯದ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕಗೊಂಡ ಇವರು ನವೆಂಬರ್ 03, 2018 ರಂದು ಕರ್ನಾಟಕ ಉಚ್ಛ ನ್ಯಾಯಾಲಯದ ಖಾಯಂ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿರುತ್ತಾರೆ.