ಮುಕ್ತಾಯ ಮಾಡು
    • ನಮ್ಮ ಬೆಂಗಳೂರು

      ನಮ್ಮ ಬೆಂಗಳೂರು

    • ಸಿಟಿ ಸಿವಿಲ್ ಕೋರ್ಟ್ ಕಾಂಪ್ಲೆಕ್ಸ್

      ಸಿಟಿ ಸಿವಿಲ್ ಕೋರ್ಟ್ ಕಾಂಪ್ಲೆಕ್ಸ್

    • ಮೇಯೊ ಹಾಲ್ ಕೋರ್ಟ್ ಕಾಂಪ್ಲೆಕ್ಸ್

      ಮೇಯೊ ಹಾಲ್ ಕೋರ್ಟ್ ಕಾಂಪ್ಲೆಕ್ಸ್

    • ವಾಣಿಜ್ಯ ನ್ಯಾಯಾಲಯ ಸಂಕೀರ್ಣ

      ವಾಣಿಜ್ಯ ನ್ಯಾಯಾಲಯ ಸಂಕೀರ್ಣ

    • ಕಬ್ಬನ್ ಪಾರ್ಕ್ ಮತ್ತು ಲಾಲ್ ಬಾಗ್

      ಕಬ್ಬನ್ ಪಾರ್ಕ್ ಮತ್ತು ಲಾಲ್ ಬಾಗ್

    • ಸಿ ಎಂ ಎಂ ನ್ಯಾಯಾಲಯಗಳ ಸಂಕೀರ್ಣ

      ಸಿ ಎಂ ಎಂ ನ್ಯಾಯಾಲಯಗಳ ಸಂಕೀರ್ಣ

    • ಕೌಟುಂಬಿಕ ನ್ಯಾಯಾಲಯ ನ್ಯಾಯ ದೇಗುಲ

      ಕೌಟುಂಬಿಕ ನ್ಯಾಯಾಲಯ ನ್ಯಾಯ ದೇಗುಲ

    • ಲಘು ವ್ಯವಹಾರಗಳ ನ್ಯಾಯಾಲಯ

      ಲಘು ವ್ಯವಹಾರಗಳ ನ್ಯಾಯಾಲಯ

    • ಹಲಸೂರು ಮತ್ತು ಸ್ಯಾಂಕಿ ಟ್ಯಾಂಕ್ ಕೆರೆಗಳು

      ಹಲಸೂರು ಮತ್ತು ಸ್ಯಾಂಕಿ ಟ್ಯಾಂಕ್ ಕೆರೆಗಳು

    ಜಿಲ್ಲಾ ನ್ಯಾಯಾಲಯದ ಬಗ್ಗೆ

    ನಗರ ಸಿವಿಲ್ ನ್ಯಾಯಾಲಯದ ಸಂಕ್ಷಿಪ್ತ ಪರಿಚಯ

    ಬೆಂಗಳೂರಿನ ನಗರ ಸಿವಿಲ್ ನ್ಯಾಯಾಲಯವು 19.11.1980ರಂದು ಸ್ಧಾಪನೆಗೊಂಡಿದ್ದು, ಅಂದಿನ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಗೌರವಾನ್ವಿತ ಶ್ರೀ ವೈ.ವಿ. ಚಂದ್ರಚೂಡರವರಿಂದ ಉದ್ಘಾಟನೆಗೊಂಡಿದ್ದು, ಅಂದಿನ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಗೌರವಾನ್ವಿತ ಶ್ರೀಯುತ ಎಂ.ಎನ್.ವೆಂಕಟಾಚಲಯ್ಯ ಹಾಗೂ ಅಂದಿನ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಗೌರವಾನ್ವಿತ ಆರ್. ಗುಂಡೂರಾಯರ ಉಪಸ್ಧಿತಿಯಲ್ಲಿ ಆರಂಭಗೊಂಡಿತ್ತು.

    ಈ ಹಿಂದೆ ಬೆಂಗಳೂರು ನಗರದಲ್ಲಿ, ಬೇರೆ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಂತೆ, ಮುನ್ಸೀಫ್ ನ್ಯಾಯಾಲಯ, ಹಿರಿಯ ಸಿವಿಲ್‍ ನ್ಯಾಯಾಧೀಶರ ನ್ಯಾಯಾಲಯ ಮತ್ತು ಜಿಲ್ಲಾ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿದ್ದವು, ಬೆಳೆಯುತ್ತಿರುವ ಬೆಂಗಳೂರಿನ ಬೆಳವಣಿಗೆಯನ್ನು ಮತ್ತು ದಾಖಲಾಗುತ್ತಿದ್ದ ಮೊಕದ್ದಮೆಗಳ ಏರುಗತಿಯನ್ನು ಅರಿತು ಮತ್ತು ಆಗ ಕಾರ್ಯನಿರ್ವಹಿಸುತ್ತಿದ್ದ ನ್ಯಾಯಾಲಯಗಳಿಂದ ನಿರೀಕ್ಷಿತ ಉದ್ದೇಶ ಸಾಧ್ಯವಿಲ್ಲವೆಂದು ಮನಗಂಡು, ಅಲ್ಲದೇ ನ್ಯಾಯಾಲಯಗಳ ತೀರ್ಪಿಗೆ ಮೇಲ್ಮನವಿಗಳನ್ನು, ವಿವಿಧ ಸ್ತರದ ಉನ್ನತ ನ್ಯಾಯಾಲಯಗಳಿಗೆ ಸಲ್ಲಿಸಬೇಕಾದ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ, ಮೇಲಸ್ತರದ ನ್ಯಾಯಾಧೀಶರು ಕಾರ್ಯನಿರ್ವಹಿಸುವ ಮತ್ತು ಅವರುಗಳಿಂದ ಬರುವ ತೀರ್ಪು ಗುಣಮಟ್ಟದಿಂದ ಕೂಡಿರಬೇಕು, ಕಕ್ಷಿದಾರರು ಅವುಗಳಿಂದ ತೃಪ್ತರಾಗಬೇಕೆಂಬ ಸದುದ್ದೇಶದಿಂದ, ಮತ್ತು ಸಲ್ಲಿಸಲಾಗುವ ಮೇಲ್ಮನವಿಗಳ ಸಂಖ್ಯೆ ಇದರಿಂದ ಕಡಿಮೆಯಾಗಬಹುದೆಂಬ ಉದ್ದೇಶದಿಂದ, ಗೌರವಾನ್ವಿತ ಕರ್ನಾಟಕ ಉಚ್ಚ ನ್ಯಾಯಾಲಯ, ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದ ಬಾಂಬೆ, ಹಾಗೂ ಅಹಮದಾಬಾದ್‍ನ ನಗರ ಸಿವಿಲ್ ನ್ಯಾಯಾಲಯಗಳನ್ನು ಸಂದರ್ಶಿಸಿ, ಅವುಗಳ ಕಾರ್ಯನಿರ್ವಹಣೆಯ ಬಗ್ಗೆ ಅಧ್ಯಯನ ಕೈಗೊಂಡು, ವಿವರವಾದ ವರದಿಯನ್ನು ನೀಡಲು ಉನ್ನತ ಮಟ್ಟದ ನ್ಯಾಯಾಂಗ ಅಧಿಕಾರಿಗಳನ್ನು ಆ ನಗರಗಳಿಗೆ ನಿಯೋಜನೆ ಮಾಡಿ, ಅವರು ನೀಡಿದ ವರದಿಗಳನ್ನು ಆಧರಿಸಿ, ವ್ಯವಸ್ಥೆಯ ಅಳವಡಿಕೆಯ ಸಾಧಕ ಭಾದಕಗಳನ್ನು ಚರ್ಚಿಸಿ, ವಿಮರ್ಶಿಸಿ, ಬೆಂಗಳೂರು ನಗರ ಸಿವಿಲ್ ನ್ಯಾಯಾಲಯದ ಸ್ಧಾಪನೆಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿತ್ತು.

    ಅದರಂತೆ, ಕರ್ನಾಟಕ ರಾಜ್ಯ ಸರ್ಕಾರ ನಗರ ಸಿವಿಲ್ ನ್ಯಾಯಾಲಯ ಕಾಯ್ದೆ, 1979ನ್ನು ಜಾರಿಗೊಳಿಸಿದ್ದು, ಸದರಿ ಆದೇಶ ಕರ್ನಾಟಕ ವಿಶೇಷ ರಾಜ್ಯ ಪತ್ರದಲ್ಲಿ 17ನೇ ಏಪ್ರಿಲ್ 1980ರಂದು ಪ್ರಕಟಗೊಂಡು, ಸರ್ಕಾರದ ಅಧಿಸೂಚನೆ ಸಂಖ್ಯೆ ಲಾ-263 ಎಲ್‍ಸಿಇ ದಿನಾಂಕ 05.11.1980ರಂತೆ ನಗರ ಸಿವಿಲ್‍ ನ್ಯಾಯಾಲಯ ಸ್ಧಾಪನೆಗೊಂಡು, ದಿನಾಂಕ 17.11.1980ರಿಂದ ಶುಭ ಕಾರ್ಯರಂಭ ಮಾಡಿತ್ತು. ಶ್ರೀಯುತ ಪಿ.ಎ. ಕುಲಕರ್ಣಿ ಹಿರಿಯ ಜಿಲ್ಲಾ ನ್ಯಾಯಾಧೀಶರನ್ನು, ಪ್ರಥಮ ಪ್ರಧಾನ ನಗರ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರನ್ನಾಗಿ ನೇಮಕ ಮಾಡಲಾಗಿತ್ತು, ಶ್ರೀಯುತರು ಮುಂದೆ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ನೇಮಕಗೊಂಡರು.

    ಕಾರ್ಯಾರಂಭದ ಪ್ರಾರಂಭದಲ್ಲಿ, ಬೆಂಗಳೂರು ನಗರ ಸಿವಿಲ್ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿದ್ದ ಎಲ್ಲಾ ವರ್ಗಗಳ ಮೊಕದ್ದಮೆಗಳ ಸಂಖ್ಯೆ 31,772. ಆರಂಭದಲ್ಲಿ ಹಿರಿಯ ಶ್ರೇಣಿಯ ಜಿಲ್ಲಾ ನ್ಯಾಯಾಧೀಶರನ್ನು ಪ್ರಧಾನ ನಗರ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರನ್ನಾಗಿಯೂ ಜೊತೆಗೆ ಉಳಿದ 18 ಅಪರ ಜಿಲ್ಲಾ ನ್ಯಾಯಾಧೀಶರನ್ನು ನೇಮಕ ಮಾಡಲಾಗಿದ್ದು, ಅಂದು ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗಳ ಸಂಖ್ಯೆ ಕೇವಲ 391. ತದನಂತರದ ಬೆಳವಣಿಗೆಯಲ್ಲಿ ಮೊಕದ್ದಮೆಗಳ ದಾಖಲಾತಿಯಲ್ಲಾದ ಏರಿಕೆಗೆ ಅನುಗುಣವಾಗಿ, ಕಾಲ ಕಾಲಕ್ಕೆ ಹೆಚ್ಚುವರಿ ನಗರ ಸಿವಿಲ್ ನ್ಯಾಯಾಲಯಗಳನ್ನು ಸ್ಧಾಪಿಸಿ, ನ್ಯಾಯಾಲಯಗಳ ಸಂಖ್ಯೆಗೆ ಅನುಗುಣವಾಗಿ ವಿವಿಧ ಶ್ರೇಣಿಯ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದ್ದು, ಹಾಲಿ ನಗರ ಸಿವಿಲ್ ನ್ಯಾಯಾಲಯ ಬೆಂಗಳೂರಿನಲ್ಲಿ, ಪ್ರಧಾನ ನಗರ ಸಿವಿಲ್ ನ್ಯಾಯಾಧೀಶರನ್ನು ಒಳಗೊಂಡಂತೆ, ಒಟ್ಟು 95 ನಗರ ಸಿವಿಲ್ ಮತ್ತು ಸತ್ರ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ.

    ಮುಖ್ಯ ಮಹಾನಗರ ದಂಡಾಧಿಕಾರಿಗಳ ನ್ಯಾಯಾಲಯಗಳ ಸಂಕ್ಷಿಪ್ತ ಪರಿಚಯ

    ದಿನಾಂಕ 07.04.1970 ರಂದು ಅಂದಿನ ಮೈಸೂರು ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಗೌರವಾನ್ವಿತ ಎಂ. ಸದಾಶಿವಯ್ಯ ಹಾಗೂ ಅಂದಿನ ಮೈಸೂರು ಸರ್ಕಾರದ ಕಾನೂನು ಸಚಿವರ ಸಮ್ಮುಖದಲ್ಲಿ ಬೆಂಗಳೂರು ನಗರದ ನೃಪತುಂಗ ರಸ್ತೆಯ ಮುಖ್ಯ ಮಹಾನಗರ ದಂಡಾಧಿಕಾರಿಗಳ ನ್ಯಾಯಾಲಯದ ಮುಖ್ಯ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಿರುತ್ತಾರೆ. ದಿನಾಂಕಃ 09.03.1977ರಂದು ಕರ್ನಾಟಕ ಉಚ್ಚ ನ್ಯಾಯಾಲಯದ ಅಂದಿನ ಗೌರವಾನ್ವಿತ ನ್ಯಾಯಮೂರ್ತಿಗಳಾದ ಕೆ. ಭೀಮಯ್ಯರವರ ಸಮ್ಮುಖದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಅಂದಿನ ಗೌರವಾನ್ವಿತ ನ್ಯಾಯಮೂರ್ತಿಗಳಾದ ಸಿ. ಹೊನ್ನಯ್ಯರವರು ಮುಖ್ಯ ಮಹಾನಗರ ದಂಡಾಧಿಕಾರಿಗಳ ನ್ಯಾಯಾಲಯದ ಕಟ್ಟಡವನ್ನು ಉದ್ಫಾಟನೆ ಮಾಡಿರುತ್ತಾರೆ.

    ಮುುಖ್ಯ ಮಹಾನಗರ ದಂಡಾಧಿಕಾರಿಗಳ ನ್ಯಾಯಾಲಯಗಳ ಸಂಕೀರ್ಣದ ಪೂರ್ವ ದಿಕ್ಕಿಗೆ ಇರುವ ಪೂರಕ ಕಟ್ಟಡದ ಶಂಕುಸ್ಥಾಪನಾ ಸಮಾರಂಭವು ದಿನಾಂಕಃ 06.10.2005 ರಂದು ಕರ್ನಾಟಕ ಉಚ್ಚ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಕೆ. ರಾಮಣ್ಣರವರ ಉಪಸ್ಥಿತಿಯಲ್ಲಿ ಗೌರವಾನ್ವಿತ ನ್ಯಾಯಮೂರ್ತಿ ಎಸ್.ಆರ್. ನಾಯಕ್ ರವರಿಂದ ನೆರವೇರಿಸಲ್ಪಟ್ಟಿತ್ತು. ಸದರಿ ಕಟ್ಟಡವು ಪೂರ್ಣಗೊಂಡ ನಂತರ ದಿನಾಂಕಃ 29.10.2007 ರಂದು ಕರ್ನಾಟಕ ಉಚ್ಚ ನ್ಯಾಯಾಲಯದ ಅಂದಿನ ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ರವಿ ಬಿ. ನಾಯಕ್‍, ಶ್ರೀ ಸುಭಾಷ್‍ ಬಿ. ಆದಿ, ಇವರುಗಳ ಘನ ಉಪಸ್ಥಿತಿಯಲ್ಲಿ ಅಂದಿನ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿ ಶ್ರೀ ಸಿರಿಯಾಕ್‍ ಜೋಸೆಫ್‍ರವರಿಂದ ಉದ್ಫಾಟನೆಗೊಂಡಿರುತ್ತದೆ.

    ಮುುಖ್ಯ ಮಹಾನಗರ ದಂಡಾಧಿಕಾರಿಗಳ ನ್ಯಾಯಾಲಯದ ಸಂಕೀರ್ಣದ ಹೆಚ್ಚುವರಿ ಪೂರಕ ಕಟ್ಟಡದ ಉದ್ಛಾಟನಾ ಸಮಾರಂಭ ಹಾಗೂ 2ನೇ ಹಂತದ ಕಾಮಗಾರಿಯ ಶಂಕುಸ್ಥಾಪನಾ ಸಮಾರಂಭವು ದಿನಾಂಕಃ 09.09.2019ರಂದು ಭಾರತದ ಸರ್ವೋಚ್ಚ ನ್ಯಾಯಾಲಯದ ಅಂದಿನ ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಮೋಹನ ಎಂ. ಶಾಂತನಗೌಡರ್, ಶ್ರೀ ಎಸ್‍. ಅಬ್ದುಲ್‍ ನಜೀರ್, ಶ್ರೀ ಎ.ಎಸ್. ಬೋಪಣ್ಣರವರಿಂದ ನೆರವೇರಿಸಲ್ಪಟ್ಟಿತ್ತು.[...]

    ಮತ್ತಷ್ಟು ಓದು
    Hon'ble Mr. Justice N. V. Anjaria
    ಕರ್ನಾಟಕ ಉಚ್ಛ ನ್ಯಾಯಾಲಯದ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳು ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಎನ್.ವಿ. ಅಂಜಾರಿಯಾ
    Hon'ble Mr. Justice V. Kameswar Rao
    ಆಡಳಿತಾತ್ಮಕ ನ್ಯಾಯಾಧೀಶರು, ನಗರ ಸಿವಿಲ್ ನ್ಯಾಯಾಲಯ, ಬೆಂಗಳೂರು ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ವಿ.ಕಾಮೇಶ್ವರ ರಾವ್
    ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಶ್ರೀನಿವಾಸ ಹರೀಶ್ ಕುಮಾರ್
    ಆಡಳಿತಾತ್ಮಕ ನ್ಯಾಯಾಧೀಶರು, ಮುಖ್ಯ ಜುಡಿಷಿಯಲ್‍ ಮ್ಯಾಜಿಸ್ಟ್ರೇಟ್ ಘಟಕ ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಶ್ರೀನಿವಾಸ ಹರೀಶ್ ಕುಮಾರ್
    Hon'ble Mrs. Justice Anu Sivaraman
    ಆಡಳಿತಾತ್ಮಕ ನ್ಯಾಯಾಧೀಶರು, ಕೌಟುಂಬಿಕ ನ್ಯಾಯಾಲಯಗಳು ಗೌರವಾನ್ವಿತ ನ್ಯಾಯಮೂರ್ತಿ ಶ್ರೀಮತಿ ಕೆ.ಎಸ್.ಮುದಗಲ್
    ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಸೂರಜ್ ಗೋವಿಂದರಾಜ್
    ಆಡಳಿತಾತ್ಮಕ ನ್ಯಾಯಾಧೀಶರು, ಲಘು ವ್ಯವಹಾರಗಳ ನ್ಯಾಯಾಲಯ ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಸೂರಜ್ ಗೋವಿಂದರಾಜ್
    ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಹಂಚಾಟೆ ಸಂಜೀವಕುಮಾರ್
    ಆಡಳಿತಾತ್ಮಕ ನ್ಯಾಯಾಧೀಶರು, ಕಾರ್ಮಿಕ ಮತ್ತು ಕೈಗಾರಿಕಾ ನ್ಯಾಯಮಂಡಳಿ ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಹಂಚಾಟೆ ಸಂಜೀವಕುಮಾರ್
    ಶ್ರೀ. ಮುರಲೀಧರ ಪೈ
    ಪ್ರಧಾನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರು ಶ್ರೀ. ಮುರಲೀಧರ ಪೈ ಬಿ.
    ಎಲ್ಲಾ ವೀಕ್ಷಿಸಿ
    ಎಲ್ಲಾ ವೀಕ್ಷಿಸಿ

    ಯಾವುದೇ ಪೋಸ್ಟ್ ಕಂಡುಬಂದಿಲ್ಲ.

    ಇಕೋರ್ಟ್ ಸೇವೆಗಳು

    ವ್ಯಾಜ್ಯಗಳ ಪಟ್ಟಿ

    ವ್ಯಾಜ್ಯಗಳ ಪಟ್ಟಿ

    ವ್ಯಾಜ್ಯಗಳ ಪಟ್ಟಿ

    ಕೇವಿಯೇಟ್ ಹುಡುಕಾಟ

    ಕೇವಿಯೇಟ್ ಹುಡುಕಾಟ

    ಕೇವಿಯೇಟ್ ಹುಡುಕಾಟ

    ಇಕೋರ್ಟ್ ಸೇವೆಗಳ ಅಪ್ಲಿಕೇಶನ್

    ಭಾರತದ ಅಧೀನ ಮತ್ತು ಹೆಚ್ಚಿನ ಹೈಕೋರ್ಟ್‌ಗಳಿಂದ ಪ್ರಕರಣದ ಮಾಹಿತಿಯನ್ನು ಒದಗಿಸುತ್ತದೆ ಮತ್ತು ನಕ್ಷೆಯಲ್ಲಿ ಕ್ಯಾಲೆಂಡರ್, ಕೇವಿಯಟ್ ಹುಡುಕಾಟ ಮತ್ತು ನ್ಯಾಯಾಲಯ ಸಂಕೀರ್ಣ ಸ್ಥಳದಂತಹ ಸೌಲಭ್ಯಗಳನ್ನು ಒದಗಿಸುತ್ತದೆ…

    ರಿಟರ್ನ್ SMS ಮೂಲಕ ನಿಮ್ಮ ಪ್ರಕರಣದ ಪ್ರಸ್ತುತ ಸ್ಥಿತಿಯನ್ನು ತಿಳಿಯಿರಿ
    ಇಕೋರ್ಟ್ 9766899899″ ಗೆ SMS ಮಾಡಿ